ಬನ್ನೇರುಘಟ್ಟ : ಆಧುನಿಕ ತಂತ್ರಜ್ಞಾನ ಬೆಳವಣಿಗೆಯಾದಂತೆ ಅದರ ಉಪಯೋಗದ ಜತೆಗೆ ದುರುಪಯೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ತಂತ್ರಜ್ಞಾನದ ಬಳಕೆಯ ಸಮಯದಲ್ಲಿ ಮಹಿಳೆಯರು ಜಾಗೂರಕರಾಗಿರಬೇಕು. ವೈಯಕ್ತಿಕ ಮಾಹಿತಿಗಳು ಸೋರಿಕೆಯಾದಂತೆ ಎಚ್ಚರ ವಹಿಸಬೇಕು. ಸಹಕಾರ ಕ್ಷೇತ್ರದಲ್ಲಿಯೂ ಸಹ ಇಂದು ಮಹಿಳೆಯರು ಹಣಕಾಸಿನ ವ್ಯವಹಾರ ನಡೆಸುವಾಗ ತಂತ್ರಜ್ಞಾನ ಬಳಕೆಯ ಸಮಯದಲ್ಲಿ ಅತ್ಯಂತ ಜಾಗೃತೆಯಿಂದ ವ್ಯವಹರಿಸಿ ಎಂದು ಆಗ್ನೇಯ ಸೈಬರ್ ಅಪಾರಾಧ ವಿಭಾಗದ ಎಸಿಪಿ ಗೋವರ್ಧನ್ ಗೋಪಾಲ್ ಅವರು ತಿಳಿಸಿದರು.
